Monday, January 12, 2009

ಹೊಟ್ಟೆಪಾಡಿನ ದಾರಿ


"ಯಾವುದಾದ್ರೂ ದೇವರ ಪಟ ಬೇಕೆ ತಗೊಳ್ಳಿ ಸರ್"
ಪರಿಚಿತ ದನಿ
ಹಿಂದಿರುಗಿ ನೋಡಿದೆ
ಪ್ಲಾಸ್ಟಿಕ್ ಕಟ್ಟಿನಲ್ಲಿ ಎಲ್ಲ ದೇವರುಗಳು
ನಸುನಗುತ ನಿಂತಿದ್ದರು-
ಬರೀ ಹದಿನೈದು ರುಪಾಯಿಗೆ
ಕೆಲವರು ನಿಂತರು, ದಿಟ್ಟಿಸಿದರು
ಕೆಲವರು ಚೌಕಾಶಿ ಮಾಡಿದರು
ಕೆಲವರು ಕೊಂಡರು

ಯಾರು ಇಲ್ಲದಾಗ ವಿಚಾರಿಸಿದೆ
"ಹೇಗಿದೆ ವ್ಯಾಪಾರ?"
"ಏನಿಲ್ಲ ಸರ್,
ಮುಂಚೆ ಲಾಟರಿ ವ್ಯಾಪಾರವೇ
ಉತ್ತಮವಾಗಿತ್ತು
ನಾಕು ಕಾಸು ಉಳೀತಿತ್ತು
ಈಗ ಹೊಟ್ಟೇಪಾಡಿಗೇ ಸರಿ"
ಮೊದಲು
ಅವರಿವರ ಆಸೆ ನಂಬಿಕೆಗಳ ಮಾರುತ್ತಿದ್ದವ
ಈಗ
ತನ್ನದೇ ಆಸೆ ನಂಬಿಕೆಗಳ ಮಾರುತ್ತಿದ್ದಾನೆ

ತಮಿಳು ಮೂಲ:
ಸೋರ್ಣಭಾರತಿ(ಮುನಿಯಾಂಡಿ)
ಚಿತ್ರಕೃಪೆ: thrudviewfinder.blogspot.com

1 comment:

  1. ಅನುವಾದ ಚನ್ನಾಗಿದೆ.ದೇವರು ದೇವಸ್ಥಾನದಲ್ಲಿ ದುಬಾರಿಯಾಗಿದ್ದಾನೆ. ಫುಟ್ಪಾತ್ ನಲ್ಲಿ ಸೋವಿಯಾಗಿದ್ದರೂ ಕೊಳ್ಳುವವರ ಚೌಕಾಸಿ ನಂಬಿದವನ ಜೀವನವನ್ನು ಹರಾಜಿಗಿಟ್ಟಿದೆ. ಇದಲ್ಲವೇ ವಾಸ್ತವ!

    ReplyDelete